ಫಾಲ್ಸ -
	ಟೇಲಿಯೇಸೀ ಕುಟುಂಬಕ್ಕೆ ಸೇರಿದ ಫಲಸಸ್ಯ. ಗ್ರೀವಿಯ ಸಬಿನಿಕ್ವಾಲಿಸ್ ಇದರ ವೈಜಾÐನಿಕ ಹೆಸರು. ಭಾರತದ ಅನೇಕ ಕಡೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಇದರ ಕಾಡುಬಗೆ ಬೆಳೆಯುತ್ತದೆ. ಗುಜಾರಾತಿನ ಬರೋಡ ಪ್ರಾಂತ್ಯದಲ್ಲಿ ಇದರ ಬೇಸಾಯ ಹೆಚ್ಚು. ಇದು ಚಿಕ್ಕ ಪೊದೆಯಾಗಿ ಬೆಳೆಯುತ್ತದೆ. ಮೇ-ಜೂನ್ ಅವಧಿಯಲ್ಲಿ ಅಸಂಖ್ಯಾತ ಹಣ್ಣುಗಳನ್ನು ಬಿಡುತ್ತದೆ. ಹಣ್ಣುಗಳಿಂದ ತಯಾರಿಸಲಾಗುವ ತಂಪು ಪಾನೀಯ ಬಲು ಹಿತಕರವೂ ಚೇತೋಹಾರಿಯೂ ಆಗಿದೆ. 

	ಫಾಲ್ಸವನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಕಾಂಡತುಂಡುಗಳನ್ನು ನೆಟ್ಟು ವೃದ್ಧಿಸುವುದೂ ಇದೆ. ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ 3ಮೀ. ಅಂತರ ಇರುವಂತೆ ಅವನ್ನು ನೆಡಲಾಗುತ್ತದೆ. ಚಳಿಗಾಲದಲ್ಲಿ ಗಿಡದಿಂದ ಎಲೆಗಳು ಪೂರ್ತಿಉದುರಿಹೋಗುವುವು. ಆಗ ಬುಡದಿಂದ ಒಂದು ಮೀಟರ್ ಎತ್ತರದಲ್ಲಿ ಕಾಂಡವನ್ನು ಕತ್ತರಿಸಿ ಹಾಕುವುದುಂಟು. ಇದರಿಂದ ರೆಂಬೆಗಳು ಹುಲುಸಾಗಿ ಬೆಳೆಯುವಂತಾಗುತ್ತದೆ. ತುಂಡುಗಳನ್ನು ನೆಟ್ಟ ಒಂದೆರಡು ವರ್ಷಗಳಲ್ಲಿ ಫಲ ಕೊಯ್ಲಿಗೆ ಸಿದ್ಧ. ಒಂದು ಗಿಡ ಸುಮಾರು 10 ಕೆಜಿ. ಹಣ್ಣು ಕೊಡುತ್ತದೆ.
(ಕೆ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ